ವಿಜಯಪುರ: ವಿಜಯಪುರದ ಮನಗೂಳಿ ಬೈಪಾಸ್ ಬಳಿಯ ಹೋಟೆಲ್ನಲ್ಲಿ ಟೇಬಲ್ ಮೇಲೆ ಕುಳಿತುಕೊಂಡು ಟೀ ಕುಡಿಯುವ ಸಲುವಾಗಿ ಓರ್ವನ ಹತ್ಯೆಗೈದಿದ್ದ ಸಂದರ್ಭವೂ ಸಿಸಿಟಿವಿ ವಿಡಿಯೋ ಸೆರೆಯಾಗಿದೆ.
ನಾಗರಾಜ್ ಗಣಿ, ಅಭಿಲಾಷ್ ರಜಪೂತ, ರಮೇಶ ಉಗಾರಕರ್, ಶಿವಪುತ್ರ ನಾವ್ಹಿ ಸೇರಿ 6 ಜನರು ಗಣಪತಿಸಿಂಗ್ ರಜಪೂತನ್ನು ಹತ್ಯೆಗೈದು ಪರಾರಿಯಾಗಿರುವ ವಿಡಿಯೋ ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಣಪತಿಸಿಂಗ್ ರಜಪೂತ ಹಿಗ್ಗಾಮುಗ್ಗ ಥಳಿಸುವ ವಿಡಿಯೋ ಸಿಕ್ಕಿದೆ. ಅಲ್ಲದೇ, ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.