ವಿಜಯಪುರ: ಹೆರಿಗೆ ಮಾಡಿಸುವಲ್ಲಿ ನಿರ್ಲಕ್ಷ್ಯ ತೋರಿದ ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಇತರೇ ದಾದಿಯರಿಗೆ 15 ಲಕ್ಷ ದಂಡ ವಿಧಿಸಿ ವಿಜಯಪುರ ಜಿಲ್ಲಾ ಗ್ರಾಹಕರ ಆಯೋಗ ಮಹತ್ವದ ತೀರ್ಪು ನೀಡಿದೆ.
ತಿಕೋಟಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಪ್ರಸ್ತುತ ಮುಳವಾಡ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಿನಿ ಹಾಗೂ ಶೂಷ್ರುಕಿಯರಾದ ರೇಣುಕಾ, ಬನ್ನೂರ, ಜ್ಯೋತಿ ಹೊಸಮನಿ, ಸುನಿತಾ ಭಾವಿಮನಿ ಭಾರೀ ಮೊತ್ತದ ದಂಡ ತೆತ್ತಬೇಕಾದವರು. ಅಥಣಿ ತಾಲೂಕಿನ ಹಣಮಾಪುರ ಗ್ರಾಮದ ಜಯಶ್ರೀ ತೀವ್ರ ಹೆರಿಗೆ ನೋವಿನಿಂದ 2018ರ ಜೂನ 3ರಂದು ದಾಖಲಿಸಿಕೊಂಡು ದಾದಿಯರು ಹೊಟ್ಟೆ ಮೇಲೆ ಕುಳಿತು, ಹೊಟ್ಟೆ ಒತ್ತುವ ಮೂಲಕ ಹೆರಿಗೆ ಮಾಡಿಸಿಕೊಂಡರು. ಅದಕ್ಕಾಗಿ ಚಿಕಿತ್ಸೆ ಫಲಿಸದೇ 2018ರ ಜೂನ 6ರಂದು ಮಹಿಳೆ ಮೃತಪಟ್ಟಿದ್ದಳು. ಆಯೋಗದ ಅಧ್ಯಕ್ಷ ಅಂಬಾದಾಸ ಕುಲಕರ್ಣಿ, ಮಹಿಳಾ ಸದಸ್ಯೆ ವಿ.ಬಿ. ಮುತಾಲಿಕ ದೇಸಾಯಿ, ಕಮಲಕಿಶೋರ ಜೋಶಿಯನ್ನೊಳಗೊಂಡ ಆಯೋಗ ಸದಸ್ಯರಿಗೆ ತೀರ್ಪಿನಲ್ಲಿ ತಿಳಿಸಿದ್ದಾರೆ.
ದೂರುದಾರರ ಪರವಾಗಿ ನ್ಯಾಯವಾದಿ ಎ.ಜಿ. ಗುಳಗಾಂವಿ ವಾದ ಮಂಡಿಸಿದ್ದರು.