ವಿಜಯಪುರ: ದೇಶ, ರಾಜ್ಯದಲ್ಲಿ ದೊಡ್ಡ ದೊಡ್ಡ ಸ್ವಾಮಿಜಿಗಳ ಬೆನ್ನಿಗೆ ಚೂರಿ ಹಾಕಲು ಬಹಳಷ್ಟು ಜನ ದೊಡ್ಡವರು ಬೆನ್ನು ಹತ್ತಿರುತ್ತಾರೆ ಎಂದು ವಿಜಯಪುರದ ಉತ್ನಾಳ ಗ್ರಾಮದಲ್ಲಿ ಮನಗೂಳಿ ಮಠದ ಸಂಗನಬಸವ ಶ್ರೀಗಳು ಹೇಳಿದರು.
ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಮುರುಘಾ ಶರಣರು ರಾಜ್ಯದ ಪ್ರಭಾವಿ ಸ್ವಾಮಿಗಳಲ್ಲಿ ಒಬ್ಬರು. ಅದಕ್ಕಾಗಿ ಅವರ ಮೇಲೆ ಬಂದಿರುವ ಆರೋಪದ ಬಗ್ಗೆ
ಸತ್ಯಾಂಶ ತಿಳಿದುಕೊಳ್ಳದೇ ಯಾರು ಏನು ಹೇಳೋಕೆ ಇಷ್ಟ ಪಡಲ್ಲ ಎಂದರು. ಮುರುಘಾ ಶರಣರು ಎಲ್ಲಾ ಪರಂಪರೆ ಪೂಜ್ಯರನ್ನು ಪ್ರೀತಿಯಿಂದ ಕಾಣುತ್ತಾರೆ. ಮುರುಘಾ ಶರಣರು ಯಾವುದೇ ತಪ್ಪು ಇಲ್ಲ ಅನ್ನೋದು ನನ್ನ ಅಭಿಪ್ರಾಯವಾವಿದೆ. ಇದರಲ್ಲಿ ಜಯಶಾಲಿ ಆಗಿ ಬರ್ತಾರೆ ಅನ್ನೋ ವಿಶ್ವಾಸವಿದೆ ಎಂದರು.