ವಿಜಯಪುರ: ಟಿಪ್ಪು ಸುಲ್ತಾನನ್ನು ವರ್ಣನೆ ಮಾಡಿದಕ್ಕೆ ಮುರುಘಾ ಶ್ರೀಗಳಿಗೆ ಈ ಗತಿ ಬಂದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಶ್ರೀಗಳ ವಿರುದ್ಧ ವಾಗ್ದಾಳಿ ಮಾಡಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಪರವಾಗಿದ್ದರ ಪರಿಸ್ಥಿತಿ ಏನಾಗಿದೆ ನೋಡಿ. ಟಿಪ್ಪು ಖಡ್ಗ ಪಡೆದ ವಿಜಯ ಮಲ್ಯ ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೂಡ್ಯೂಸರ್ ಹಾಳಾದರು ಎಂದರು. ಇನ್ನೂ ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ ಸೋತರು.
ಅಲ್ಲದೇ, ಚಿತ್ರದುರ್ಗ ಮದಕರಿ ನಾಯಕರು, ಒನಕೆ ಓಬವ್ವರ ನಾಡು ಆಗಿದೆ. ಅಂತಹ ನಾಯಕರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು ತಪ್ಪು. ಮದಕರಿ ನಾಯಕರ ಪ್ರದೇಶದ ಮಠದಲ್ಲಿ ಟಿಪ್ಪುವಿನ ವರ್ಣನೆ ಮಾಡಬಾರದಿತ್ತು. ಮುರುಘಾ ಮಠ ಲಿಂಗಾಯತ ಮಠ. ಹಿಂದೂಗಳ ಮಠ. ಆದ್ರೇ, ಅಲ್ಲಿನ ಸ್ವಾಮಿಗಳು ಕಮ್ಯೂನಿಸ್ಟ್ರನ್ನು ನಂಬಿ ಹೀಗಾದರು ಎಂದರು.