ವಿಜಯಪುರ: ಪಾನ್ ಕಾರ್ಡ್ ಅಪ್ಡೇಟ್ ಹೆಸರಿನಲ್ಲಿ ಆನ್ಲೈನ್ ಮೂಲಕ ಲಕ್ಷಾಂತರ ನಗದು ವಂಚನೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಲಗುಣಕಿ ಗ್ರಾಮದಲ್ಲಿ ನಡೆದಿದೆ.
ಸೂರ್ಯಕಾಂತ ಹೊನ್ನಪ್ಪ ಸಿನಖೇಡ್ ಮೋಸ ಹೋದವರು. ಇನ್ನು ಆನ್ಲೈನ್ ನಲ್ಲಿ ಪಾನ್ ಕಾರ್ಡ್ ಅಪ್ಡೇಟ್ ಮಾಡುವಂತೆ ಲಿಂಕ್ ಕಳುಹಿಸಿದ್ದಾರೆ. ಲಿಂಕ್ ಓಪನ್ಗೈದು ಅಪ್ಡೇಟ್ ಮಾಡಿದ್ದಾಗ 1.30 ಲಕ್ಷ ನಗದು ವಂಚನೆ ಮಾಡಿದ್ದಾರೆ. ಈ ಕುರಿತು ಸೂರ್ಯಕಾಂತ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.