ವಿಜಯಪುರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹಲಗಣಿ ಕ್ರಾಸ್ ಬಳಿ ನಡೆದಿದೆ.
ಕಾತ್ರಾಳ ಗ್ರಾಮದ ಸಂಜೀವ ರಾಮಪ್ಪ ಕಾಂಬಳೆ ಹಾಗೂ ಸಿದರಾಯ ಸಂಗಪ್ಪ ಮನಗೂಳಿ ಬಂಧಿತ ಆರೋಪಿಗಳು. ಇವರಿಂದ 850 ಗ್ರಾಂ ಗಾಂಜಾ ಹಾಗೂ ಒಂದು ಬೈಕ್ ಸೇರಿ ಒಟ್ಟು 60 ಸಾವಿರ ರೂ.ಮೌಲ್ಯದ ಸಾಮಗ್ರಿ ಜಫ್ತಿ ಮಾಡಿಕೊಳ್ಳಲಾಗಿದೆ. ಈ ಕುರಿತು ವಿಜಯಪುರ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.