ವಿಜಯಪುರ: ಮಳೆ ಹಾನಿಯಾದ ಸ್ಥಳಕ್ಕೆ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೂ ವಿಜಯಪುರದ ಅಲ್ಲಾಪುರ ತಾಂಡಾಗಳಲ್ಲಿ ಮಳೆ ನೀರು ನುಗ್ಗಿದ ಪ್ರದೇಶಕ್ಕೆ ಶಾಸಕ ದೇವಾನಂದ ಭೇಟಿ ಪರಿಶೀಲನೆ ಮಾಡಿದರು. ಅಲ್ಲದೇ, ಅಲ್ಲಾಪುರ ತಾಂಡಾಗಳಿಗೆ ಮಳೆ ನುಗ್ಗಿರುವ ಹಿನ್ನಲೆ ಶಾಸಕ ದೇವಾನಂದ್ ಚವ್ಹಾಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.
ಭಾರಿ ಮಳೆ ಹಾನಿಯಾಗಿರುವ ಬಗ್ಗೆ ಸ್ಥಳೀಯರಿಂದ ಶಾಸಕ ಚವ್ಹಾಣ ಮಾಹಿತಿ ಕಲೆ ಹಾಕಿದರು. ಇನ್ನು ಮಳೆಯಿಂದಾಗಿ ಮನೆ ಹಾನಿಯಾಗಿರುವ ದೇವಿಬಾಯಿ ಜಾಧವಗೆ ಸ್ಥಳದಲ್ಲೆ 10 ಸಾವಿರ ಪರಿಹಾರವನ್ನು ಶಾಸಕ ದೇವಾನಂದ ಚವ್ಹಾಣ ನೀಡಿದರು.