ವಿಜಯಪುರ: ರಾಜ್ಯದ ಇಮೇಜ್ ಸಂಪೂರ್ಣ ಹಾಳಾಗಿದೆ ಎಂದು ವಿಜಯಪುರದಲ್ಲಿ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ಹೇಳಿದರು.
ನಗರದ ಬಿಎಲ್ಡಿಈನಲ್ಲಿ ನಡೆದ ಘಟಿಕೋತ್ಸವ ಬಳಿಕ ಮಾತನಾಡಿದ ಅವರು, ಮುಂದೆ ಒಳ್ಳೆಯ ಸರ್ಕಾರ ಬರ್ಬೇಕು. ಇವರು ಮಾಡಿದ ಡ್ಯಾಮೇಜ್ ಕಂಟ್ರೋಲ್ ಮಾಡಬೇಕಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರ
ವ್ಯವಸ್ಥೆಯನ್ನು ಹಾಳು ಮಾಡಿ ಬಿಟ್ಟಿದ್ದಾರೆ. ವ್ಯವಸ್ಥೆ ಸರಿಪಡೆಸೋದಕ್ಕೆ ಮತ್ತೆ ಎರಡು ವರ್ಷ ಬೇಕಾಗುತ್ತದೆ ಎಂದರು. ಇನ್ನೂ ಆರ್ಥಿಕ ಪರಿಸ್ಥಿತಿ ಹದೆಗೆಡಿಸಿ ಬಿಟ್ಟಿದ್ದಾರೆ. ಮತ್ತೆ ನಮ್ಮ ರಾಜ್ಯ ನಂ 1, ನಂ 2 ಆಗಬೇಕು. ಗತವೈಭವ ಮರಳಬೇಕಿದೆ ಎಂದು
ಮಾತಿನಲ್ಲೆ ಸರ್ಕಾರವನ್ನು ಕುಟುಕಿದರು. ನಮಗೆ ಭವ್ಯ, ವೈಭವದ ಇತಿಹಾಸ ಇದೆ, ಅದು ಮರಳಬೇಕು. ಈ ಕೆಟ್ಟ ಸರ್ಕಾರ, 40% ಸರ್ಕಾರ ತೊಲಗಬೇಕು.
ಪಿಎಸ್ಐ ಸ್ಕ್ಯಾಮ್ ಅಷ್ಟೆ ಅಲ್ಲ, ಬೇರೆ ಬೇರೆ ಹಗರಣ ಬರ್ತಿವೆ. ನಮ್ಮ ರಾಜ್ಯದ ಈಮೇಜಿಗೆ ಧಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮಾಜಿ ಸಿಎಂ ಎಚ್ಡಿ
ಕುಮಾರಸ್ವಾಮಿ ಯಾವಾಗ ಯಾರ ಜೊತೆಗೆ ಸಾತ್ ಕೊಡ್ತಾರೆ ಗೊತ್ತಿಲ್ಲ. ಮೈಸೂರು ಮೇಯರ್ ಆಯ್ತು ಅಲ್ಲಿ ಸಾತ್ ಕೊಟ್ರು. ಉಪ ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿ ಕಾಂಗ್ರೆಸ್ ಸೋಲಿಸಿದ್ರು. ಚುನಾವಣೆಯಲ್ಲಿ ಕುಮಾರಸ್ವಾಮಿಯವ್ರಿಗೆ ಸಾತ್ ಕೊಡೊದನ್ನ ನಾವು ಬಹಳ ಯೋಚಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ಅವರಿಗೆ ಸಾತ್ ಕೊಡಲು ನಾವು ಯೋಚಿಸುವ ಹಾಗಾಗಿದೆ. ಸಾತ್ ಕೊಡುವ ನಿರ್ಧಾರವನ್ನ ಪಕ್ಷ ತೆಗೆದುಕೊಳ್ಳುತ್ತದೆ ಎಂದರು.