ವಿಜಯಪುರ: ವಾಹನ, ಮೊಬೈಲ್, ಲ್ಯಾಪ್ಟಾಪ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ಬಡಿಕಮಾನ್ ಬಳಿ ನಡೆದಿದೆ.
ಅರುಣ ಸುಭಾಷ್ ಚವ್ಹಾಣ ಹಾಗೂ ರಮೇಶ ಲಕ್ಷ್ಮಣ ಸಿಂಗಾರೆಡ್ಡಿ ಬಂಧಿತ ಆರೋಪಿಗಳು. ಇನ್ನು ಆರೋಪಿ ಅರುಣನಿಂದ 2.19 ಲಕ್ಷ ಮೌಲ್ಯದ ಒಂದು ಆಟೋ ಹಾಗೂ ರಮೇಶನಿಂದ 35 ಸಾವಿರ ಮೌಲ್ಯದ ಒಂದು ಲ್ಯಾಪ್ಟಾಪ್, ಮೂರು ಮೊಬೈಲ್ ಜಪ್ತಿಗೈದಿದ್ದಾರೆ. ತನಿಖಾ ತಂಡದಲ್ಲಿ ಸಿಪಿಐ ವಿಜಯಮಹಾಂತೇಶ ಮಠಪತಿ, ಪಿಎಸ್ಐ ಸೀತಾರಾಮ್, ಪೇದೆಗಳಾದ ಯೋಗೇಶ ಮಾಳಿ, ಭೀಮಾಶಂಕರ ಮಕಣಾಪುರ, ಕೋಲೂರ, ರಾಠೋಡ ಇದ್ದರು. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.