ವಿಜಯಪುರ: ಪ್ರೇಮಿಗಳು ಓಡಿ ಹೋಗಿದಕ್ಕೆ ತಂದೆ ತಾಯಿ ಮೇಲೆ ಹಲ್ಲೆಗೈದರುವ ಘಟನೆ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ನಡೆದಿದೆ.
ಪ್ರೇಮಿಗಳಾದ ಅಮರ್ (22) ಅರ್ಚನಾ (24) ಓಡಿ ಹೋಗಿದವರು. ಆದ್ರೇ, ಅಮರ್ ತಂದೆ ಗೋರಖನಾಥ್ ಚವ್ಹಾಣ, ತಾಯಿ ಕವಿತಾ ಮೇಲೆ ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ಹಲ್ಲೆಗೈದಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕಾಗಿ ಅಜ್ಞಾತ ಸ್ಥಳದಿಂದ ನಮ್ಮ ಕುಟುಂಬದವರನ್ನು ರಕ್ಷಣೆ ಮಾಡಿ ಎಂದು ಪೊಲೀಸರಿಗೆ ಪ್ರೇಮಿಗಳಾದ ಅಮರ್ ಹಾಗೂ ಅರ್ಚನಾ ಮನವಿ ಮಾಡಿದ್ದಾರೆ.