ವಿಜಯಪುರ: ಅಕ್ರಮವಾಗಿ ಮಹಾರಾಷ್ಟ್ರದ ಮದ್ಯವನ್ನು ಸಂಗ್ರಹಿಸಿಟ್ಟಿದ್ದ ಮಹಾರಾಷ್ಟ್ರ ಮದ್ಯವನ್ನು ಅಬಕಾರಿ ಪೊಲೀಸರು ದಾಳಿಗೈದು ಜಪ್ತಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ನಡೆದಿದೆ.
ಪ್ರಭು ಡಾಬಾದ ಮೇಲೆ ಪೊಲೀಸರು ದಾಳಿಗೈದು ಸುಭಾಷ್ ತೇಜು ರಾಠೋಡನ್ನು ಬಂಧಿಸಿದ್ದಾರೆ. ದಾಳಿ ವೇಳೆಯಲ್ಲಿ ಒಂದು ಕ್ವಾಟರ್ನ 9 ಇಂಪೀರಿಯಲ್ ಬ್ಲೂ ವಿಸ್ಕಿ, 28 ಖಾಲಿ ಬಾಟಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿಯಲ್ಲಿ ಅಬಕಾರಿ ನೀರಿಕ್ಷಕ ಜಿ.ಎಸ್. ಪಾಟೀಲ, ಉಪನಿರೀಕ್ಷಕ ಎಸ್.ಎ. ಹುಂಡೇಕಾರ ದಾಳಿ ಮಾಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದರಿ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಜೆಬಿ ಭಜಂತ್ರಿ, ಪೇದೆಗಳಾದ ಯಮನಪ್ಪ ಮಾದರ, ಅನಿಲ ಕರ್ಜಗಿ, ಭೀಮಾಶಂಕರ ಸಂಗೊಂಡ ಉಪಸ್ಥಿತರಿದ್ದರು.