ವಿಜಯಪುರ: ಕುಡಿದ ನಶೆಯಲ್ಲಿ ರಸ್ತೆ ಮೇಲೆ ಮಲಗಿದ ಇಬ್ಬರಿಗೆ ಕಾರ್ ಡಿಕ್ಕಿಯಾಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ.
ಇನ್ನು ರಸ್ತೆಯಲ್ಲಿ ಮಲಗಿದ ಮದ್ಯ ಪ್ರಿಯರಿಬ್ಬರ ಮೇಲೆ KA 28 D 7745 ನಂಬರಿನ್ ಡಿಕ್ಕಿಯಾಗಿದೆ. ಅಲ್ಲದೇ, ಡಿಕ್ಕಿಯಾಗಿರುವ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮತ್ತೋರ್ವನಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳೀಯರು ನೀರು ನೀಡಿ ಆರೋಗ್ಯ ವಿಚಾರಿಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.