ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ನರಹಂತಕ ಸಿಎಂ ಎಂದು ವಿಜಯಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.
ವಿಜಯಪುರ ನಾಗಠಾಣದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತದಲ್ಲಿ 3 ಸಾವಿರ ಜನ ರೈತರ ಆತ್ಮಹತ್ಯೆಯಾಗಿದೆ. ಆಗ ಸಿದ್ದರಾಮಯ್ಯ ಕಣ್ಣೀರು ಹಾಕಿಲ್ಲ. ಬೆಳಗಾವಿಯಲ್ಲಿ ವಿಠ್ಠಲ್ ಅರಬಾಂವಿ ಆತ್ಮಹತ್ಯೆ ಮಾಡಿಕೊಂಡ್ರೆ ಅಲ್ಲಿ ಸಿದ್ದರಾಮಯ್ಯ ಮನೆಗೆ ಹಣ ನೀಡಲಿಲ್ಲ. ಗೋ ಹಂತಕರಿಗೆ ಸಿದ್ದರಾಮಯ್ಯ ರಕ್ಷಕರಾಗಿದ್ದರು.
ಇದಕ್ಕೆ ಕಾರಣ ಸಿದ್ದರಾಮಯ್ಯ ಎಂದು ವಾಗ್ದಾಳಿ ಮಾಡಿದರು. ಅವರ ಕಾಲಗಟ್ಟದಲ್ಲಿ ಜೈಲಲ್ಲಿರಬೇಕಿದ್ದ 2 ಸಾವಿರ PFI, SDPI ಕಾರ್ಯಕರ್ತರನ್ನ ಬಿಟ್ಟರು. ಮೈಸೂರಲ್ಲಿ ಶಾಸಕನಿಗೆ ಚೂರಿ ಹಾಕಿದಾಗ ಬಂಧಿಸಲಿಲ್ಲ ಎಂದರು. ಇನ್ನೂ ಸಿದ್ದರಾಮಯ್ಯ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ತಾರೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ತಾರೆ ಎಂದು ಭವಿಷ್ಯ ನುಡಿದರು. ಅಲ್ಲದೇ, ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ. ಬಿಜೆಪಿ 150 ಸ್ಥಾನಗಳ ಮೂಲಕ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲು ಬಿಜೆಪಿ ಗೆಲ್ಲುತ್ತೆ, ಎಂ ಬಿ ಪಾಟೀಲ್ ಮನೆ ಸೇರುತ್ತೆ, ಕಮಲ ಅರಳುತ್ತದೆ ಎಂದರು.
ಭ್ರಷ್ಟಾಚಾರ, ಭಯೋತ್ಪಾದನೆ ಕಾಂಗ್ರೆಸ್ ಕೊಡುಗೆ ಆಗಿದೆ. 60 ವರ್ಷದಲ್ಲಿ ಕಾಂಗ್ರೆಸ್ ನೀಡಿದ ಕೊಡುಗೆ ಇದು. ಕಾಂಗ್ರೆಸ್ ಭೌತಿಕವಾಗಿ ಹಾಳಾಗಿದೆ.
ಕಾಂಗ್ರೆಸ್ ತನ್ನ ರಾಜಕೀಯ ಅಧಿಕಾರದ ಆಸೆಗೆ ಭ್ರಷ್ಟಾಚಾರ, ಭಯೋತ್ಪಾದನೆ ಸೃಷ್ಟಿ ಮಾಡಿದೆ. ಅದಕ್ಕಾಗಿ ಕಾಂಗ್ರೆಸ್ನ್ನ ಜನ ತಿರಸ್ಕಾರ ಮಾಡಿದ್ದಾರೆ ಎಂದರು.