ವಿಜಯಪುರ: ಸಾಲಗಾರರ ಸಾಲಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಸಾಯಿಪಾರ್ಕ್ ಬಳಿ ನಡೆದಿದೆ.
43 ವರ್ಷದ ಭೀರಪ್ಪ ಭಿಮ್ಮಪ್ಪ ಅಬಲಾಪುರ ಮೃತಪಟ್ಟಿರುವ ದುರ್ದೈವಿ. ಇನ್ನು ಮನೆ ನಿರ್ಮಾಣಕ್ಕೆಂದು ಲಕ್ಷಾಂತರ ಹಣ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಸಾಲಗಾರರು ಹಣ ನೀಡುವಂತೆ ಕೇಳುತ್ತಿದ್ದರು. ಅದಕ್ಕಾಗಿ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.