ವಿಜಯಪುರ: ಕಲ್ಲು ಗಣಿಗಾರಿಕಾ ಕ್ವಾರಿಯಲ್ಲಿ ಸ್ನಾನ ಮಾಡಲು ಹೋದಾಗ ವ್ಯಕ್ತಿ ಬಿದ್ದು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಯುಕೆಪಿ ಬಳಿ ನಡೆದಿದೆ.
ಕೊಲ್ಹಾರ ಪಟ್ಟಣದ ರಾವತ್ ದಳವಾಯಿ(50) ಮೃತಪಟ್ಟಿರುವ ದುರ್ದೈವಿ. ಇನ್ನೂ ವ್ಯಕ್ತಿ ಕ್ವಾರಿಯಲ್ಲಿ ಸ್ನಾನ ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.