ವಿಜಯಪುರ: ಕಳ್ಳರು ಎರಡು ಅಂಗಡಿಯಲ್ಲಿ ಸಾವಿರಾರು ನಗದು ಹಾಗೂ ವಸ್ತುಗಳನ್ನು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ವಾಜಪೇಯಿ ಸರ್ಕಲ್ನಲ್ಲಿ ನಡೆದಿದೆ.
ಒಂದು ಮೆಡಿಕಲ್ ಅಂಗಡಿ ಹಾಗೂ ಇನ್ನೊಂದು ಕಿರಾಣಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾರೆ. ಇನ್ನು ರಾಜು ಗಡೆದ ಎಂಬುವರಿಗೆ ಸೇರಿದ ಮೆಡಿಕಲ್ ಅಂಗಡಿ 50 ಸಾವಿರ ನಗದು, ಕಿರಾಣಿ ಅಂಗಡಿಯಲ್ಲಿ 5 ಸಾವಿರ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯಪುರ ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.