ವಿಜಯಪುರ: ಅಪರಿಚಿತ ವ್ಯಕ್ತಿಯ ಶವವೊಂದು ವಿಜಯಪುರ ನಗರದ ಸರ್ಕಾರಿ ಶಾಲೆ ನಂಬರ ಒಂದರ ಬಳಿ ಪತ್ತೆಯಾಗಿದೆ.
ಸುಮಾರು 35-40 ವಯಸ್ಸಿನ ಪುರುಷನ ಶವ ಪತ್ತೆಯಾಗಿದೆ. ಅಲ್ಲದೇ, ಯಾವುದೇ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ಅದಕ್ಕಾಗಿ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಸ್ಥರಿದ್ರೇ ಪೊಲೀಸ ಠಾಣೆಗೆ ಭೇಟಿ ನೀಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. ಇನ್ನೂ ಮೃತಪಟ್ಟಿರುವ ಅಪರಿಚಿತ ವ್ಯಕ್ತಿ ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಅಲ್ಲದೇ, ಕಪ್ಪು ಬಣ್ಣದ ಶರ್ಟ್, ಕಪ್ಪು ಬಣ್ಣದ ಜಿನ್ಸ್ ಧರಿಸಿದ್ದಾನೆ. ವಿಜಯಪುರ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.