ವಿಜಯಪುರ: ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಕಾರ್ತಿಹಾಳ ಬಳಿ ನಡೆದಿದೆ.
25 ವರ್ಷದ ಯಾಕೂಬ್ ಚಪ್ಪರಬಂದ್ ಮೃತಪಟ್ಟಿರುವ ದುರ್ದೈವಿ. ಹಿಂಬದಿಯ ಸವಾರ ಮೆಹಬೂಬ್ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧಿಸಿದೆ.