ವಿಜಯಪುರ: ಯಾವುದೇ ಅಡೆತಡೆ ಇಲ್ಲದಂತೆ ಚುನಾವಣೆ ಪ್ರಕ್ರಿಯೆ ನಡೆಸಲು ಪೊಲೀಸ್ ಇಲಾಖೆ ಸರ್ವ ಸನ್ನದ್ದವಾಗಿದೆ ಎಂದು ಎಸ್ಪಿ ಎಚ್ಡಿ ಆನಂದಕುಮಾರ ಮಾಹಿತಿ ನೀಡಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 37 ಬೂತ್ ಅತೀ ಸೂಕ್ಷ್ಮ, 80 ಸೂಕ್ಷ್ಮ, 186 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 27 ಮೊಬೈಲ್ ಸೆಕ್ಟರ್ ಸ್ಥಾಪಿಸಲಾಗಿದೆ. ಮೊಬೈಲ್ ಸ್ಕ್ವಾಡ್ ಇರಲಿದ್ದು, ಅದನ್ನು ಸೂಪರ್ ವೈಸರ್ ಮಾಡಲು ಏರ್ಪಾಡು ಮಾಡಿಕೊಳ್ಳಲಾಗಿದೆ ಎಂದರು.
ಓರ್ವ ಎಎಸ್ ಪಿ, 4 ಡಿವೈಎಸ್ ಪಿ ಒಂಭತ್ತು ಸಿಪಿಐ, 27 ಪಿಎಸ್ ಐ ಸೇರಿ ಒಟ್ಟು 700 ಕ್ಕೂ ಅಧಿಕ ಸಿಬ್ಬಂದಿ ನೇಮಿಸಲಾಗಿದೆ. ಯಾವುದೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದ ರೀತಿ ಚುನಾವಣೆ ಪ್ರಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.