ವಿಜಯಪುರ: ಕಾಲುವೆಯಲ್ಲಿ ನೀರು ಕುಡಿಯಲು ಹೋದ ವೇಳೆ ಮೂರ್ಛೆ ಬಂದು ಕಾಲುವೆಯಲ್ಲಿ ಬಿದ್ದು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ತಾಲೂಕಿನ ತಡಲಗಿ ಗ್ರಾಮದ
ಬಳಿಯ ಮುಳವಾಡ ಏತ ನೀರಾವರಿ ಯೋಜನೆಯ
ಕಾಲುವೆಯಲ್ಲಿ ನಡೆದಿದೆ.
ತಡಲಗಿ ಗ್ರಾಮದ ರೈತ ಹನುಮಂತ ಈರಪ್ಪ ಹಡಪದ (45) ಎಂದು ಗುರುತಿಸಲಾಗಿದೆ.
ಮನೆಯಿಂದ ಕುರಿಗಳನ್ನು ಮೇಯಿಸಲು
ಹೋಗುವುದಾಗಿ ಹೇಳಿ ಕುರಿಗಳನ್ನು ದಡ್ಡಿಯಲ್ಲಿ ಬಿಟ್ಟು ಮರಳಿ ಬರುವಾಗ ಈ ಘಟನೆ ಸಂಭವಿಸಿದೆ. ಕೊಲ್ಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.