ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಬೆನ್ನಲ್ಲೇ ಮತದಾನಕ್ಕೆ ಬಹಿಷ್ಕಾರದ ಕೂಗು ಕೇಳಿ ಬಂದಿದೆ.
ವಿಜಯಪುರ ನಗರದ ವಾರ್ಡ ನಂಬರ 2 ರ ದಲಿತ ಸೇರಿದಂತೆ ಹಲವು ಸಮಾಜಗಳಿಂದ ಮತದಾನ ಬಹಿಷ್ಕಾರ ಮಾಡೋದಾಗಿ ಘೋಷಿಸಿದ್ದಾರೆ. ವಾರ್ಡ ನಂ 2ರಲ್ಲಿ 4 ಸಾವಿರಕ್ಕೂ ಅಧಿಕ ದಲಿತ ಮತದಾರರಿದ್ದಾರೆ. ಇದನ್ನು ಆಧರಿಸಿ ಎಸ್ಸಿ ಮೀಸಲಾತಿ ಘೋಷಣೆ ಆಗಿತ್ತು. ಆದ್ರೇ, ಇದನ್ನ ತೆಗೆದು ಇದೀಗ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟವಾಗಿದೆ ಎಂದು ಸ್ಥಳಿಯರು ದೂರಿದ್ದಾರೆ.
ಕಾರಣ ಇದನ್ನ ಬದಲಿಸಬೇಕು. ಇಲ್ಲದೇ ಹೋದ್ರೇ ಚುನಾವಣೆ ನಡೆಸಿದ್ರೆ ಮತದಾನ ಬಹಿಷ್ಕಾರ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.