ವಿಜಯಪುರ: ಮುಸ್ಲಿಮರ 2ಎ ಮೀಸಲಾತಿ ತೆಗೆದು ಹಾಕಬೇಕು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಹಾಗೂ 2ಎ ಎರಡೆರಡು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. 2ಎ ಮೀಸಲಾತಿಯಿಂದ ತೆಗೆದುಹಾಕಲು ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಸರ್ಕಾರ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ. ನಾವು ಕೂಡ ಪುನರ್ ಪರಿಶೀಲನೆಗೆ ಸಿಎಂ ಅವರಿಗೆ ಹೇಳಿದ್ದೇವೆ ಎಂದರು. ಇನ್ನು ಶಾಸಕ ಬೆಲ್ಲದ್ ಮಾತಿನಲ್ಲಿ ಸತ್ಯವಿದೆ. ಎರಡು ಕಡೆಗಳಲ್ಲಿ ಲಾಭ ಪಡೆಯುತ್ತಿರೋದನ್ನ ತೆಗೆದು ಉಳಿದ ಹಿಂದೂಳಿದವರಿಗೆ ಮೀಸಲಾತಿ ಹೆಚ್ಚಿಸಬೇಕು.
ಸಿಎಂ ಜೊತೆಗೆ ಚರ್ಚೆಯಾಗಿದೆ, ಪರಿವಾರದಿಂದಲು ಚರ್ಚೆ ಆಗಿದೆ. ಒಂದು ಸಮುದಾಯ ಎರಡು ಕಡೆಗಳಲ್ಲಿ ಲಾಭ ಪಡೆಯೋದನ್ನ ತಡೆಯಬೇಕು. ಅಲ್ಲದೇ, ದೇಶ ವಿರೋಧಿ ಚಟುವಟಿಕೆ ಮಾಡ್ತಾರೆ, ಎರಡು ಕಡೆ ಲಾಭ ಪಡೆಯುತ್ತಾರೆ. ಅಂತವರ ಎಲ್ಲ ಮೀಸಲಾತಿ ಸೌಲಭ್ಯ ರದ್ದು ಪಡೆಸಬೇಕು. ಆದಷ್ಟು ಬೇಗನೆ ಸರ್ಕಾರ ಕ್ರಮ ವಹಿಸಲಿದೆ ಎಂದರು.