ವಿಜಯಪುರ: ಕಳೆದ ತಡರಾತ್ರಿ ಸುರಿದ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿರುವ ಘಟನೆ ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆಯಲ್ಲಿ ನಡೆದಿದೆ.
ಇಂದಿರಾಬಾಯಿ ಎಂಬುವರ ವೃದ್ಧೆಯ ಮನೆ ಮೇಲ್ಚಾವಣಿ ಕುಸಿತವಾಗಿದೆ. ಮುಂಭಾಗದ ಕೋಣೆಯಲ್ಲಿ ಮಲಗಿದ್ದ ವೇಳೆ ಹಿಂಬದಿ ಕೋಣೆ ಮೇಲ್ಛಾವಣಿ ಕುಸಿತ ಆಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಅದಕ್ಕಾಗಿ ನನಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಇಂದಿರಾಬಾಯಿ ಕಣ್ಣೀರು ಹಾಕುತ್ತಿದ್ದಾರೆ.