ವಿಜಯಪುರ: ವಾರ್ಡ್ ನಂಬರ 24 ನನ್ನ ಕುಟುಂಬವಿದ್ದಂತೆ. ಅದು ನನ್ನ ಉಸಿರು. ಕೋವಿಡ್ ವೇಳೆಯಲ್ಲಿ ಉಸಿರು ನೀಡಿದ್ದೇನೆ.
ಅದಕ್ಕಾಗಿ ನನಗೆ ಉಸಿರು ನೀಡುವಂತೆ ಪಕ್ಷೇತರ ಅಭ್ಯರ್ಥಿ ವಿಮಲಾ ಖಾನೆ ಪತಿ ರಫೀಕ್ಅಹ್ಮದ ಖಾನೆ ಮತದಾರರಲ್ಲಿ ಮನವಿ ಮಾಡಿದರು. ವಿಜಯಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಣದ ಕೈಗಳ ಕೈವಾಡದಿಂದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ.
ಆದ್ರೇ, ನಾನು ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದಿಲ್ಲ. ನಾನು ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಅಭಿವೃದ್ಧಿ ಮಂತ್ರವೇ ನನ್ನ ಗುರಿಯಾಗಿದೆ. ಅದಕ್ಕಾಗಿ ನನ್ನ ಧರ್ಮಪತ್ನಿಗೆ ಮತ ನೀಡಿ, ಮುಂದಿನ ದಿನಗಳಲ್ಲಿ ನಾನು ಅಭಿವೃದ್ಧಿಯಿಂದ ಜನ ಸೇವೆ ಮಾಡುತ್ತೇನೆ ಎಂದರು.