ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಡಿಜೆ ಸೌಂಡ್ ಹಚ್ಚಿ ರ್ಯಾಲಿ ಮಾಡುತ್ತಿದ್ದ ಆಮ್ ಆದ್ಮಿ ಪಕ್ಷದ ವಾಹನವನ್ನು ಪೊಲೀಸರು ಜಪ್ತಿಗೈದಿರುವ ಘಟನೆ ವಿಜಯಪುರ ನಗರದ ಗಾಂಧಿಚೌಕ್ನಲ್ಲಿ ನಡೆದಿದೆ.
ಇನ್ನು ನಗರದಲ್ಲಿ ಆಮ್ ಆದ್ಮಿ ಪಕ್ಷದ ನೂತನ ಚುನಾವಣಾ ಕಚೇರಿಯ ಉದ್ಘಾಟನೆ ಬಳಿಕ ನಗರಾದ್ಯಂತ ಡಿಜೆ ಸೌಂಡ್ ಹಚ್ಚಿಕೊಂಡು ರ್ಯಾಲಿ ಮಾಡುವಾಗ ಸಿಪಿಐ ಸಿದ್ಧೇಶ ನೇತೃತ್ವದ ತಂಡದ ಪೊಲೀಸರು ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.