ವಿಜಯಪುರ: ಸಿಂಗರ್ ಮಾಧುರಿ ಪವಾರ ಹೆಸರಿನಲ್ಲಿ ಆನ್ಲೈನ್ ಮೂಲಕ ಲಕ್ಷಾಂತರ ನಗದು ವಂಚನೆ ಮಾಡಿರುವ ಘಟನೆ ವಿಜಯಪುರದ ಮಲಪ್ರಭಾ ನಗರದಲ್ಲಿ ನಡೆದಿದೆ.
ಪ್ರಕಾಶ ಶಿವಣ್ಣ ಮಠ ಮೋಸ ಹೋದವರು. ಇನ್ನು ಹುಬ್ಬಳ್ಳಿಯಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ನೀವು ಸಂಗೀತ ಕಾರ್ಯಕ್ರಮ ನೀಡಬೇಕು. ಈ ಕಾರ್ಯಕ್ರಮಕ್ಕೆ ಮಾಧುರಿ ಪವಾರನ್ನು ನೀವೇ ಆಹ್ವಾನಿಸಬೇಕು. ಅದಕ್ಕಾಗಿ ನಾವೇ ಹಣ ನೀಡುತ್ತವೆ. ಈಗಾಗಲೇ ನಿಮ್ಗೆ ಅಕೌಂಟ್ಗೆ 3.5 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ. ಮೂರು ಗಂಟೆಯಲ್ಲಿ ಹಣ ಜಮಾ ಆಗುತ್ತದೆ ಎಂದು ಮಠ ಬಳಿಯ ಎರಡು ಲಕ್ಷ ಆನ್ಲೈನ್ ಮೂಲಕ ವಂಚನೆ ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಓ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.