ವಿಜಯಪುರ: ಮಾಜಿ ಗೃಹ ಸಚಿವ ಎಂಬಿ ಪಾಟೀಲ ಧರ್ಮಪತ್ನಿಯ ಫೇಸ್ಬುಕ್ ಪೇಜ್ ಹ್ಯಾಕ್ಯಾಗಿರುವ ಘಟನೆ ವಿಜಯಪುರದ ಎಂಬಿ ಪಾಟೀಲ ನಗರದಲ್ಲಿ ನಡೆದಿದೆ.
ಆಶಾ ಪಾಟೀಲರ ಫೇಸ್ಬುಕ್ ಪೇಜ್ ಹ್ಯಾಕ್ ಆಗಿದೆ. ಇನ್ನು ಆಶಾ ಪಾಟೀಲರ ಆಪ್ತ ಸಹಾಯಕ ರವಿಶಂಕರ ಎನ್ಪಿಯ ಫೇಸ್ಬುಕ್ ಅಕೌಂಟ್ಗೆ ಆಶಾ ಪಾಟೀಲ ಪೇಜ್ ಆ್ಯಡ್ ಮಾಡಲಾಗಿತ್ತು. ಇದನ್ನು ಹ್ಯಾಕರ್ಗಳು ಹ್ಯಾಕ್ ಮಾಡಿ ಬಾಕ್ಸಿಂಗ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಲಾಗಿಂನ್ ಪಾಸವರ್ಡ್ ಚೆಂಜ್ ಮಾಡಿದ್ರೂ ಆಗುತ್ತಿಲ್ಲ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.