ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ವಿಮಲಾ ಖಾನೆ ಪತಿ ರಫೀಕ್ಅಹ್ಮದ ಖಾನೆ ಸ್ಪಷ್ಟನೆ ನೀಡಿದರು.
ವಿಜಯಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳು ಮಾಡಿದ್ರೂ ನಾನು ತಲೆ ಕಡೆಸಿಕೊಳ್ಳುವುದಿಲ್ಲ. ಮತದಾರರಲ್ಲಿ ಗೊಂದಲ ಸೃಷ್ಟಿಸಬಾರದು. ಇದಕ್ಕೆ ಅಕ್ಟೋಬರ್ 31ರಂದು ನನ್ನ ದೇವರಾದ ಮತದಾರರು ಕೈ ಹಿಡಿಯುತ್ತಾರೆ. ನನಗೆ ನನ್ನ ದೇವರ ಮೇಲೆ ನಂಬಿಕೆ ಇದೆ. ನನಗೆ ವೈರಿಗಳು ಯಾರು ಇಲ್ಲ. ಆದ್ರೇ, ನನ್ನ ವೈರಿಗಳಿಗೂ ಒಳ್ಳೆಯದು ಆಗಲಿ ಎಂದರು.