ವಿಜಯಪುರ: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಬೆಕಿನಾಳ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಕರೆಪ್ಪ ಗೊಲ್ಲಾಳಪ್ಪ ನಾಯ್ಕೋಡಿ ಆತ್ಮಹತ್ಯೆಗೆ ಶರಣಾದವರು. ಇನ್ನು ಅತೀ ವೃಷ್ಠಿಯಿಂದ ಹೊಲದಲ್ಲಿ ಹಾಕಿರುವ ಹತ್ತಿ ಬೆಳೆ ನಷ್ಟಹೊಂದಿ, ಎರಡು ಲಕ್ಷ ಸಾಲ ಮಾಡಿಕೊಂಡಿದ್ದಾರೆ. ಇನ್ನೂ ತನ್ನ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.