ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಶಾಹಿಸ್ತಾ ಮುಬಿನ್ಅಹ್ಮದ ಕುರೇಶಿ ಪರವಾಗಿ ಕುರೇಶಿ, ಮುಶ್ರಿಫ್ ಕುಟುಂಬಸ್ಥರು ಭರ್ಜರಿ ಪ್ರಚಾರ ಮಾಡಿದರು. ವಿಜಯಪುರ ನಗರದ ವಾರ್ಡ್ 27ರ ಸಕಾಫ್ರೋಜಾದಲ್ಲಿ ತಮ್ಮ ಬೆಂಬಲಿಗರು, ಹಿತೈಷಿಗಳು, ಕಾಂಗ್ರೆಸ್ ಕಾರ್ಯಕರ್ತರು ಕುರೇಶಿ ಪರ ಮತಯಾಚನೆ ನಡೆಸಿ, ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಈ ವೇಳೆಯಲ್ಲಿ ಕಾಂಗ್ರೆಸ್ ನಾಯಕರು ಬೆಂಬಲ ನೀಡಿದ್ದು, ವಾರ್ಡ್ ನಂಬರ 27ರಲ್ಲಿ ಮತದಾರರು ಅದ್ಭುತವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ವಸೀಂ ಬಂಡಾರಿ, ಸಮೀ ಜಮಾ, ಇಸ್ಮಾಯಿಲ್ ಕಲಾದಗಿ, ಜುಬೇರ್ ಪಟ್ವೇಕರ್, ಮೋಸಿನ್ ಮನಗೂಳಿ, ವಾಸು ಹತ್ತರಕಿಹಾಳ, ಇಸ್ಮಾಯಿಲ್ ಕಲಾದಗಿ, ಮತ್ತೀನ್ ಹತ್ತರಕಿಹಾಳ, ಶಾನನವಾಜ್ ತಿಕೋಟ್ಕೆರ್, ಜಮೀರ ಹುದ್ದಾರ್, ಮಹಾನಗರ ಪಾಲಿಕೆ ಮೊದಲ ಮೇಯರ್ ಸಜ್ಜಾದೇಪೀರಾ, ಅಯಾಜ್ ಖಾದರಿ ಮುಶ್ರಿಫ್, ಸೇರಿದಂತೆ ಮುಶ್ರಿಫ್ ಕುಟುಂಬಸ್ಥರು ಹಾಗೂ ಮೋಹಿನ ಶೇಖ, ಮೊಹಸಿನ ಶೇಖ, ಸೇರಿದಂತೆ ಓಣಿಯ ಹಿರಿಯರು ಮತಯಾಚನೆಯಲ್ಲಿ ಭಾಗವಹಿಸಿದರು.