ವಿಜಯಪುರ: ನಾನು ಅಬ್ಬರಿಸುತ್ತೇನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.
ವಿಜಯಪುರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಶನಿವಾರ ಮತಯಾಚನೆ ಬಳಿಕ ಮಾತನಾಡಿದ ಅವರು, ಅಂತಹ ಇಂತಹ ಹೇಳಿಕೆಗೆ ಹೇಳಲು ನನಗೆ ಸಮಯ ಇಲ್ಲ. ನಾನು ಯಾರನ್ನು ಬಿಡಲ್ಲ, ಅಬ್ಬರಿಸುತ್ತೇನೆ. ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಅಬ್ಬರಿಸಲು ಸಮಯ ಇಲ್ಲ ಎಂದರು. ಇನ್ನೂ ನಾನು ಯಾರಿಗಾದರೂ ಸಡಲ್ ಬಿಡ್ತಿನಾ..? ನಾನು ಅಬ್ಬರಿಸುತ್ತೇನೆ. ನಾನು ಯಾರ ಮನೆಗೂ ಹೋಗಿ ನಿಂತಿಲ್ಲ ಎಂದರು.
ಅಲ್ಲದೇ,ನಟ ಚೇತನ್ ವಿರುದ್ಧ ಶಾಸಕ ಯತ್ನಾಳ ವಾಗ್ದಾಳಿ ಮಾಡಿದ್ದು, ನಟ ಚೇತನನ್ನು ನಾಲಾಯಕ ಎಂದು ಕಿಡಿಕಾರಿದರು. ನಟ ಚೇತನ ಮುಸ್ಲಿಂರ ಏಜೆಂಟ್ ಆಗಿದ್ದಾರೆ. ಮುಸ್ಲಿಂ ರೊಕ್ಕಾ ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ. ಹಿಂದುತ್ವ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು. ಇನ್ನು ದೈವಾರಾಧನೆ ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂದರು.