ವಿಜಯಪುರ: ಜನರ ತೆರಿಗೆ ಜನರ ಸೇವೆಗಾಗಿ ನಾವು ಬದ್ಧ ಎಂದು ಮಾಜಿ ಮಹಾನಗರ ಪಾಲಿಕೆ ಸದಸ್ಯ ಇಲಿಯಾಸ್ಅಹ್ಮದ್ ಸಿದ್ದಿಕಿ ಮಂಗಳವಾರ ಹೇಳಿದರು.
ವಿಜಯಪುರ ನಗರದ ವಾರ್ಡ್ ನಂಬರ 25ರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶೇಖ್ ಶಬನಮ್ ಸಿದ್ದಿಕಿ ಪರವಾಗಿ ಪತಿ ಸಿದ್ದಿಕಿ ಹಾಗೂ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು.
ಇನ್ನು ದೆಹಲಿ ಮಾದರಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಮಹಾನಗರ ಪಾಲಿಕೆಯ ಎಲ್ಲ ಸೇವೆಗಳು ಒಂದು ತಿಂಗಳಲ್ಲಿ ಮುಗಿಸುವ ವ್ಯವಸ್ಥೆ, ವಾರ್ಡ್ ಕಮಿಟಿ ರಚಿಸಿ ನಾಗರಿಕರ ಶಿಫಾರಸು ಕೆಲಸಗಳು ಸೇರಿದಂತೆ ಪ್ರತಿ ವಾರ್ಡ್ಗೆ 8ರ ಗ್ಯಾರಂಟಿ ಮೇಲೆ ಮತಯಾಚನೆ ಮಾಡಿದರು. ಅದಕ್ಕಾಗಿ ತಮ್ಮ ಅಮೂಲ್ಯವಾದ ಮತವನ್ನು ಪೊರಕೆಗೆ ನೀಡಬೇಕು ಎಂದು ಮನವಿ ಮಾಡಿದರು.