ವಿಜಯಪುರ: ಎಐಎಂಐಎಂ ಅಧ್ಯಕ್ಷ ಓವೈಸಿ ವಿರುದ್ಧ ಶಾಸಕ ಯತ್ನಾಳ ವಾಗ್ದಾಳಿ ಮಾಡಿದರು. ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ದ್ರೋಹಿಗಳಿಗೆ ತೊಂದರೆ ಇದೆ. ಭಾರತ ಪರವಾಗಿ ಇರೋರಿಗೆ ಗೌರವ ಇದೆ. ಆದ್ರೇ, ಭಾರತದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುವರಿಗೆ ಬಿಜೆಪಿ ವಿರೋಧ ಇದೆ ಎಂದರು.
ಹಿಜಾಬ್ ಹಾಕಿಕೊಂಡವರು ದೇಶದ ಪ್ರಧಾನಿ ಆಗುವ ಓವೈಸಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಎಷ್ಟೋ ಮಂದಿ ದೇಶದಲ್ಲಿ ಕನಸು ಕಾಣ್ತಾರೆ. 2047 ಇಡೀ ದೇಶವೇ ಇಸ್ಲಾಮಿಕ್ ಮಾಡುವುದು ಯಾವ ಕಾಲಕ್ಕೂ ಆಗಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಅಖಂಡ ಭಾರತದಲ್ಲಿ ಸೇರಬೇಕು. ಅದಕ್ಕಾಗಿ ಪಾಕಿಸ್ತಾನ ಮೇಲೆ ಪ್ರೀತಿ ಇದೆ ಎಂದರು. ಇನ್ನು ಓವೈಸಿ ಹಾಗೇ ಪ್ರಧಾನಿ ಮೋದಿ ಅಲ್ಲ. 15 ನಿಮಿಷ ನೀಡಿದ್ರೇ ಕತ್ತಲೆ ಆಮ್ ಕರ್ತೇವೆ ಎಂದು ಓವೈಸಿ ಹೇಳಿದ್ದು ಖಂಡನೀಯ. ಆತ ದುಷ್ಟ ವ್ಯಕ್ತಿ. ಓವೈಸಿ ಭಾರತದ ಅನ್ನ, ನೀರು ಕುಡಿದು ಸುಖ ಅನುಭವಿಸುತ್ತಾರೆ. ರಾಮ ಮಂದಿರದ ಬಗ್ಗೆ ನಾಶ ಮಾಡುತ್ತೇನೆ ಎಂದಿದ್ದಾನೆ ಎಂದು ವಾಗ್ದಾಳಿ ಮಾಡಿದರು. ಭವಿಷ್ಯದಲ್ಲಿ ಹಿಂದುತ್ವವೇ ಇಡೀ ಜಗತ್ತನೇ ಆಳುತ್ತದೆ ಎಂದರು.
ಅಲ್ಲದೇ, ನೆಹರು ತಪ್ಪು ನೀತಿಗಳಿಂದ ಮರು ದಿನವೇ ಯುದ್ಧ ಆಯ್ತು. ಭಾರತದಲ್ಲಿ ತೊಂದರೆ ಆಗಿದ್ದು ನೆಹರು ಕಾಲದಲ್ಲಿ ಆಗಿದೆ. ಇನ್ನು ಬ್ರಿಟಿಷ್ ಪ್ರಧಾನಿ ರಿಷಿ ಸುಕನ್ಗೆ ಶಾಸಕ ಯತ್ನಾಳ ಶುಭಕೋರಿದರು. ಇದು ಬಹಳ ಸಂತಸ ಆಗಿದೆ. ವಿಶ್ವಗುರು ಭಾರತ ಆಗುವ ಸಂಕೇತ ಇದು ಎಂದರು.