ವಿಜಯಪುರ: ಬೈಕ್ಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದುಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಸೆಟ್ಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ.
ಇನ್ನು ಬೈಕ್ನಲ್ಲಿದ್ದ ಮಗು ಗಂಭೀರವಾಗಿ ಗಾಯಗೊಂಡಿದೆ. ಅಲ್ಲದೇ, ಬೈಕ್ ಸವಾರನ ಕೈಗೆ ನೋವು ಆಗಿದೆ. ಇನ್ನು ಕಾರ್ ಹಿಡಿಯಲು ಸ್ಥಳೀಯರು ಬೈಕ್ನಲ್ಲಿ ಬೆನ್ನು ಹತ್ತಿರದ್ರೂ ಎಸ್ಪಿ ಕಚೇರಿಯ ರಸ್ತೆ ಮಾರ್ಗವಾಗಿ ಕೆಂಪು ಕಾರಿನ ಚಾಲಕ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.