ವಿಜಯಪುರ: ಎಳನೀರು ತೆಂಗಿನಕಾಯಿ ಹೆಸರಿನಲ್ಲಿ ಆನ್ಲೈನ್ ಮೂಲಕ ಸಾವಿರಾರು ನಗದು ಮೋಸಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮಕಾನದಾರ್ ಗಲ್ಲಿಯಲ್ಲಿ ನಡೆದಿದೆ.
ಹೈದರ್ಅಲಿ ಅಬ್ದುಲ್ಜಬ್ಬಾರ್ ಮಕಾನದಾರ್ ಮೋಸ ಹೋದವರು. ಇನ್ನು ಆನ್ಲೈನ್ ಮೂಲಕ 18 ರೂಪಾಯಿ ಹಾಗೇ 2850 ಎಳನೀರು ಖರೀದಿಸಿ ವ್ಯಾಪಾರ ಮಾಡಬಹುದು. ಅದಕ್ಕಾಗಿ 51, 300 ನಗದು ಫೋನ್ಪೇ ಮೂಲಕ ಹಣ ಕಳುಹಿಸಿ ಎಳನೀರು ಕಳುಹಿಸಲಾಗುತ್ತದೆ ಎಂದಿದ್ದಾರೆ.
ಅದಕ್ಕಾಗಿ 48,300 ನಗದು ಸೆಂಡ್ ಮಾಡಿದ್ದಾರೆ. ಬಳಿಕ ಹಣವೂ ಇಲ್ಲ, ಎಳನೀರು ನೀಡದೇ ಮೋಸ ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.