ವಿಜಯಪುರ: ಎಸ್ಬಿಐ ಯೂನೋ ಆ್ಯಪ್ ಬ್ಲಾಕ್ ಆಗುತ್ತದೆ ಎಂದು ಆನ್ಲೈನ್ ಮೂಲಕ ಸಾವಿರಾರು ನಗದು ವಂಚನೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೋಳೂರಗಿ ಗ್ರಾಮದಲ್ಲಿ ನಡೆದಿದೆ.
ಸಂಗಮನಾಥ ರೇವಣಪ್ಪ ಮೆಡೇಗಾರ್ ಮೋಸ ಹೋದವರು. ಇನ್ನು ಆನ್ಲೈನ್ ಮೂಲಕ ಎಸ್ಬಿಐ YONO ಆ್ಯಪ್ನ್ನು ಬ್ಲಾಕ್ನಿಂದ ತೆಗೆದು ಹಾಕಲು ಅಪ್ಡೇಟ್ ಮಾಡುವಂತೆ ಸೂಚನೆ ನೀಡಿ ಬ್ಯಾಂಕ್ ಅಕೌಂಟ್ನಲ್ಲಿದ್ದ 25 ಸಾವಿರ ನಗದು ಮೋಸ ಮಾಡಿದ್ದಾರೆ. ಅದಕ್ಕಾಗಿ ಮೋಸ ಹೋಗಿರುವ ಸಂಗಮನಾಥ ದೂರು ದಾಖಲು ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.