ವಿಜಯಪುರ: ನನ್ಮೇಲೆ ಮತದಾರ ಆಶೀರ್ವಾದ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯೋತ್ಸವ ಹಿನ್ನಲೆ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರು ತಾವಾಗಿಯೇ ಮತ ಹಾಕುತ್ತಾರೆ. ನಾನು ಹಣದ ಆಮಿಷ ನೀಡಲ್ಲ. ಮತದಾರರು ಅಭಿವೃದ್ಧಿಗಾಗಿ ನನಗೆ ಮತ ಹಾಕುತ್ತಾರೆ ಎಂದರು.
ಇನ್ನೂ ಬಡವರಿಗೆ ಬೇಕಿರುವ ಮನೆ ವ್ಯವಸ್ಥೆ ಮಾಡುತ್ತೇನೆ. ಅದಕ್ಕಾಗಿ ಕಡ ಬಡವರಿಗೆ ಸ್ವತಃ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡುತ್ತೇನೆ. ನನಗೆ ಅಭಿವೃದ್ಧಿ ಮುಖ್ಯ ಆಗಿದೆ. ನಾನು ಯಾವುದೇ ಹಣ ಹೊಡೆಯಲ ಬರುವ ಹಣದಲ್ಲಿ ಆಸ್ಪತ್ರೆ, ಗೋಶಾಲೆಗೆ ನೀಡುತ್ತೇನೆ ಎಂದರು.