ವಿಜಯಪುರ: ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಲಕ್ಷಾಂತರ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ದರ್ಗಾ ರಸ್ತೆಯಲ್ಲಿರುವ ಜೈ ಭವಾನಿ ಕಾಂಪ್ಲೆಕ್ಸ್ನಲ್ಲಿ ನಡೆದಿದೆ.
ಇನ್ನು ಎಟಿಎಂ 12 ಲಕ್ಷ ನಗದು ಜಮಾ ಮಾಡಲಾಗಿದ್ದು, ಅದರಲ್ಲಿ ಉಳಿದಿದ್ದ 3.12 ಲಕ್ಷ ನಗದು ಕಳ್ಳರು ಕಟಿಂಗ್ ಮಷಿನ್ನಿಂದ ಕಟ್ ಮಾಡಿ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಮಹಮ್ಮದ್ರಫೀಕ್ ದೂರು ದಾಖಲು ಮಾಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.