ವಿಜಯಪುರ: ವಿಜಯಪುರ ನಗರ
ಶಾಸಕ ಯತ್ನಾಳ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಹತ್ವದ ಸಭೆ ನಡೆಸಿದ್ದಾರೆ.
ವಿಜಯಪುರ ನಗರದ ಹೊರ ಭಾಗದಲ್ಲಿರುವ ಹೈಪರ್ ಮಾರ್ಟ್ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಅರುಣ್ ಸಿಂಗ್ ಮಹತ್ವದ ಸಭೆ ಮಾಡಿದ್ದಾರೆ. ಅಲ್ಲದೇ, ಯತ್ನಾಳ, ಸಿಂಗ್ ಅರ್ಧ ಗಂಟೆಗೂ ಹೆಚ್ಚು ಇಬ್ಬರು ಮಾತು ಕಥೆ ನಡೆಸಿದ್ದಾರೆ.
ಬೆಳಿಗ್ಗೆಯಿಂದ ಅರುಣ್ ಸಿಂಗ್ ಅವರಿಂದ ಯತ್ನಾಳ ಅಂತರ ಕಾಯ್ದುಕೊಂಡಿದ್ದರು. ಇನ್ನೂ
ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಯತ್ನಾಳ ಕೇವಲ ಒಬ್ಬ ಶಾಸಕ ಎಂದು ಅರುಣ್ ಸಿಂಗ್ ಹೇಳಿಕೆ ನೀಡಿದ್ದರು. ಇದೀಗ್ ಯತ್ನಾಳ ಜೊತೆ ಸಭೆ ಮಾಡಿದ್ದಾರೆ.