ವಿಜಯಪುರ: ಕಣಕಿ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಟ್ರೈಲಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಕಣಕಿ ಭಸ್ಮವಾಗಿರುವ ಘಟನೆ ಶನಿವಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವಾಪೂರ ಗ್ರಾಮದಲ್ಲಿ ನಡೆದಿದೆ.
ದನಕರುಗಳಿಗಾಗಿ ಟ್ರ್ಯಾಕ್ಟರ್ನಲ್ಲಿ ಕಣಕಿ ತರುವಾಗ ವಿದ್ಯುತ್ ತಂತಿ ಕಣಕಿಗೆ ತಗುಲಿ ಬೆಂಕಿ ಹೊತ್ತಿ ಕಣಕಿ ಭಸ್ಮವಾಗಿದೆ. ಪಕ್ಕದಲ್ಲಿಯೇ ನೂರಾರು ಎಕರೆ ಕಬ್ಬಿನ ಗದ್ದೆಗಳಿದ್ದವು ಹೀಗಾಗಿ ಕೂಡಲೇ ಗ್ರಾಮಸ್ಥರು ಬೆಂಕಿ ನಂದಿಸಿದರು. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.