ವಿಜಯಪುರ: ನಾನ್ ವೆಜ್ ಅಂಗಡಿಯ ಹಿಂದಿನ ಗೋಡೆ ಒಡೆದು ಒಳ ನುಗ್ಗಿದ ಕಳ್ಳನೋರ್ವ ಎರಡು ಅಂಗಡಿಯಲ್ಲಿ ಸಾವಿರಾರು ಮೌಲ್ಯದ ವಸ್ತುಗಳ ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಬಸ್ ನಿಲ್ದಾಣ ಬಳಿ ರವಿವಾರ ನಡೆದಿದೆ.
ರೆಡ್ ಚಿಲ್ಲಿ ನಾವ್ ವೆಜ್ ಅಂಗಡಿ ಮಾಲೀಕ ಇರ್ಫಾನ್ ಮೊಮಿನ್ ಅಂಗಡಿಯಲ್ಲಿ 30 ಸಾವಿರ ನಗದು ಹಾಗೂ ಜಮೀಲ್ ಹರಿಯಾಳ್ರ ಸಹರಾ ಪಾನ್ಶಾಪ್ ಅಂಗಡಿಯಲ್ಲಿ 50 ಸಾವಿರಾರ ಮೌಲ್ಯದ ಸಿಗರೆಟ್, ಏರ್ ಬರ್ಡ್ ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳ ದೋಚಿ ಪರಾರಿಯಾಗಿದ್ದಾನೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.