ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಕಾಖಂಡಕಿ ಕುಟುಂಬಸ್ಥರ ಮೇಲೆ ಬಿಜೆಪಿ ಮುಖಂಡ ಗೂಳಪ್ಪ ಶೆಟಗಾರ್ ಬೆಂಬಲಿಗರು ಹಲ್ಲೆಗೈದಿರುವ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ.
ಆಕಾಶ ಕಾಖಂಡಕಿ, ಅಶೋಕ ಕಾಖಂಡಕಿ, ಪ್ರೇಮಾ ಚಲವಾದಿ, ರುಕ್ಮಿಣಿ, ರಾಜೇಶ್ವರಿ ಕಾಖಂಡಕಿ, ಗೀತಾ, ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾರೆ. ಇನ್ನು ಅಪ್ಪು ನಾಗಠಾಣ, ಸಂಗಪ್ಪ ದ್ಯಾಬೇರಿ, ಸದಾಶಿವ ಚಲವಾದಿ, ಸಂತೋಷ ಚಲವಾದಿ, ಅಪ್ಪು ಚಲವಾದಿ ಹಲ್ಲೆಗೈದಿದ್ದಾರೆ ಎಂದು ಹಲ್ಲೆಗೊಳಗಾದ ಆಕಾಶ ಆರೋಪ ಮಾಡಿದ್ದಾರೆ.
ಮಹಾನಗರ ಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ್ ಹೀನಾಯವಾಗಿ ಸೋಲು ಅನುಭವಿಸಿದ್ದರು. ಆದ್ರೇ, ಬಿಎಸ್ಪಿ ಸತೀಶ ಕುಪಕಡ್ಡಿ ಪರ ಹಲ್ಲೆಗೊಳಗಾದವರು ಕ್ಯಾಂಪೇನ್ ಮಾಡಿದ್ದರು. ಬಿಎಸ್ಪಿ ಅಭ್ಯರ್ಥಿ ಕೂಡ ಸೋಲು ಕಂಡಿದ್ದಾರೆ. ಆದ್ರೇ, ಬಿಜೆಪಿ ಅಭ್ಯರ್ಥಿ ಸೋಲಿಗೆ ಬಿಎಸ್ಪಿನವರು ಕಾರಣ ಎಂದು ಇಂದು ಏಕಾಏಕಿ ಹಲ್ಲೆಗೈದಿದ್ದಾರೆ. ಹಲ್ಲೆಗೊಳಗಾದವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.