ವಿಜಯಪುರ: ಗುಮ್ಮಟನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಆರಂಭವಾಗಿದೆ. ಅಲ್ಲದೇ, ಜಿಲ್ಲಾ ಕಾಂಗ್ರೆಸ್ ನಾಯಕರು ವಿಧಾನಸಭಾ ಟಿಕೆಟ್ಗಾಗಿ ನಾ ಮುಂದು.. ನೀ ಮುಂದು.. ಎಂದು ಟಿಕೆಟ್ಗಾಗಿ ಲಾಬಿ ಆರಂಭಿಸಿದ್ದಾರೆ.
ಅಲ್ಲದೇ, ವಿಜಯಪುರ ನಗರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಬರೋಬ್ಬರಿ 18 ಆಕಾಂಕ್ಷಿಗಳು ಟಿಕೆಟ್ಗೆ ಟಾವೆಲ್ ಹಾಕಿದ್ದಾರೆ. ಆದ್ರೇ, ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಲಿಸ್ಟ್ ವೈರಲ್ ಆಗುತ್ತಿದೆ. ಇದು ನಿಜವೋ.. ಅಥವಾ ಫೇಕ್ ಎಂಬುದು ಮಾತ್ರ ನಿಗೂಢವಾಗಿದೆ. ಕೊನೆ ಘಳಿಗೆಯಲ್ಲಿ ಯಾರಿಗೆ ಕೈ ಟಿಕೆಟ್ ಸಿಗುತ್ತದೆ ಎಂದು ಕಾಯ್ದುನೋಡಬೇಕಿದೆ…