ವಿಜಯಪುರ: ಅನ್ಯ ಜಾತಿಗಳಿಗೆ ಎಸ್ಟಿ ಪ್ರಮಾಣಪತ್ರ ನೀಡುತ್ತಿರುವುದನ್ನು ಖಂಡಿಸಿ ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಡಿಸಿ ಕಚೇರಿಯ ವರೆಗೂ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.
ಕೆಲವು ಕಾಣದ ಕೈಗಳು ಹಾಗೂ ಶಾಸಕರು ಮತಕ್ಕಾಗಿ ಅನ್ಯ ಜಾತಿಗಳಿಗೆ ಎಸ್ಟಿ ಪ್ರಮಾಣದ ನೀಡುತ್ತಿದ್ದಾರೆ. ಇದು ಖಂಡನೀಯ ವಿಷಯ ಆಗಿದೆ. ಅದಕ್ಕಾಗಿ ಅನ್ಯ ಜಾತಿಗಳಿಗೆ ಎಸ್ಟಿ ಪ್ರಮಾಣದ ನೀಡಬಾರದು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕ್ ಮಾರ್ಗವಾಗಿ ಡಿಸಿ ಕಚೇರಿಯ ಪ್ರತಿಭಟನಾ ಮೆರವಣಿಗೆ ವೇಳೆಯಲ್ಲಿ ಡಿಸಿ ಕಚೇರಿಯ ಗೇಟ್ ಏರಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇನ್ನೂ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.