ವಿಜಯಪುರ: ಜಾಗದ ವಿಚಾರಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಮೂವರು ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಿಲ್ಲಾರಟ್ಟಿ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಮರಗು ಪಾಂಡ್ರೆ ಹತ್ಯೆಯಾಗಿರುವ ದುರ್ದೈವಿ. ಇನ್ನು ಬೀರು, ಮಾಳಪ್ಪ, ಇನ್ನೋರ್ವ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಲ್ಲದೇ, ಜಾಗದ ವಿಷಯಕ್ಕೆ ಹಲವು ತಿಂಗಳಿಂದ ಇಬ್ಬರು ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಇದೀಗ್ ಮೂವರು ಸೇರಿಕೊಂಡು ಪಾಂಡ್ರೆನ್ನು ಹತ್ಯೆಗೈದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.