ವಿಜಯಪುರ: ಶಾಸಕ ಸತೀಶ ಜಾರಕಿಹೊಳಿ ಮತಕ್ಷೇತ್ರ ಬಿಹಾರ ರಾಜ್ಯದಂತೆ ಆಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬುಧವಾರ ಕಿಡಿಕಾರಿದರು.
ನನಗೆ ಸವಾಲ್ ಹಾಕಿದ್ರೂ ನೀ ಹೆಂಗ್ ಗೋಕಾಕ ಬರ್ತೀಯಾ ಎಂದು. ಅದಕ್ಕಾಗಿ ಸವಾಲ್ ಸ್ವೀಕರಿಸಿ ಗೋಕಾಕಗೆ ಹೋಗಿದ್ದೆ ಎಂದರು. ಆ ಮತಕ್ಷೇತ್ರಕ್ಕೆ ಹೋಗೋಕೆ ಯಾರಿಗೂ ಧಮ್ಮ ಇಲ್ಲ ಎನ್ನುವ ರೀತಿ ಆಗಿತ್ತು. ಗೋಕಾಕನಲ್ಲಿ ಶಾಸಕ ಸತೀಶ ಜಾರಕಿಹೊಳಿದೇ ಸಾಮ್ರಾಜ್ಯ ಆಗಿತ್ತು. ಸತೀಶ ಜಾರಕಿಹೊಳಿಗೆ ಅಂತ್ಯ ಕಾಲ್ ಬಂದಿದೆ. ಅದಕ್ಕಾಗಿ ಹಿಂಗೆಲ್ಲ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಸವನಬಾಗೇಬಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ವಿರುದ್ಧ ಶಾಸಕ ಯತ್ನಾಳ ಪರೋಕ್ಷವಾಗಿ ಟಾಂಗ್ ನೀಡಿದರು. ತಿಂಡಿ ಇದ್ರೇ ವಿಜಯಪುರ ನಗರದಿಂದ ನಿಲ್ಲು ಎಂದು ಹೇಳೇನಿ ಎಂದು ಕಿಡಿಕಾರಿದರು. ಅಲ್ಲದೇ, ಮುಸ್ಲಿಂ ಅಭಿಮಾನ ಎಲ್ಲಿ ಹೋಯ್ತು. ಇದನ್ನು ಮುಸ್ಲಿಂರು ಚಿಂತೆ ಮಾಡಬೇಕು. ಮುಸ್ಲಿಂರನ್ನು ಶಾಸಕ ಮಾಡ್ತೇನಿ ಎಂದು ಶಿವಾನಂದ ಪಾಟೀಲ ಜಿಗದಾಡಿದ್ರೂ ಎಂದು ವ್ಯಂಗ್ಯ ಮಾಡಿದರು. ಅಲ್ಲದೇ, ನಗರದಿಂದ ಸುಪುತ್ರಿಗೆ ಯಾಕೆ ಟಿಕೆಟ್ ಕೇಳಿದ್ದು ಎಂದು ಶಾಸಕ ಪಾಟೀಲ ಸ್ಪಷ್ಟನೆ ನೀಡಬೇಕು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ ಕಿಡಿಕಾರಿದ್ದು, ಇದ್ದಿದ್ದೇ ಶ್ರೀಪಾದ ಗತಿ ಎಂದು ಕೊಲ್ಹಾರಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದು ವಿರುದ್ಧ ಯತ್ನಾಳ ಹೇಳಿದರು.