ವಿಜಯಪುರ: ವಿದ್ಯಾರ್ಥಿಯ ಮೊಬೈಲ್ ನಂಬರ್ಗೆ ಬಂದ ಅನಾಮಧೇಯ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ವಿವರ ನೀಡಿ ಹಣ ಕಳೆದುಕೊಂಡಿರುವ ಘಟನೆ ವಿಜಯಪುರದ ಕಾಸಗೇರಿ ಓಣಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಿನಾಯಕ ರಾಜು ತೇಲಿ ಎಂಬಾತ ಹಣ ಕಳೆದುಕೊಂಡಿದ್ದಾರೆ. ಬೀದರನ ಸರ್ಕಾರಿ ಮಹಾವಿದ್ಯಾಲಯದಲ್ಲಿದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ರಾಜುಗೆ ಅನಾಮಧೇಯ ಮೊಬೈಲ್ ಸಂಖ್ಯೆಯಿಂದ ಲಿಂಕ್ ಬಂದಿದೆ. ಓಪನ್ ಮಾಡಲಾಗಿ ಬ್ಯಾಂಕ್ ವಿವರ ಕೇಳಿದೆ. ಆ ಪ್ರಕಾರ ಬ್ಯಾಂಕ್ ವಿವರ ನೀಡಲಾಗಿ ಖಾತೆಯಿಂದ 45,400 ಹಣ ಎಗರಿಸಲಾಗಿದೆ. ವಿಜಯಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.