ವಿಜಯಪುರ: ಅಸುನೀಗಿರುವ ಅನಾಮಧೇಯ ಶಿಶು ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮಸೂತಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹಿಂಬದಿ ಶನಿವಾರ ಪತ್ತೆಯಾಗಿದೆ.
ಇನ್ನು ಜನಿಸಿರುವ ಶಿಶುವನ್ನು ನಡು ರಸ್ತೆಯಲ್ಲಿ ಪಾಪಿ ತಾಯಿ ಬಿಸಾಕಿ ಹೋಗಿದ್ದು, ಶಿಶು ಮೃತಪಟ್ಟಿದೆ. ಅದಕ್ಕಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಗಿ ಎನ್ಟಿಪಿಸಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.