ವಿಜಯಪುರ: ಒಂದು ಧರ್ಮ ಹಿಂದೆ ಯಾರು ಹೋಗ್ಬೇಡಿ. ಅದರಿಂದ ಮಾನವ ಕುಲಕ್ಕೆ ಕಂಟಕ ಆಗುತ್ತದೆ ಎಂದು ವಿಜಯಪುರದಲ್ಲಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ದಿಂಗಾಲೇಶ್ವರ ಸ್ವಾಮಿ ರವಿವಾರ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ದಿ. ಸೈಯದ್ ಶಾ ಅಸದುಲ್ಲಾ ಹುಸೇನಿ ಚಿಶ್ತಿ ಅಲ್ ಖಾದ್ರಿ ಅವರ ಪುಣ್ಯ ಸ್ಮರಣೆ ನಿಮಿತ್ತ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾನವ ಕುಲದೊಂದಿಗೆ ಎಲ್ಲರೂ ಹೋಗ್ವೇಕು. ಅದಕ್ಕಾಗಿ ಮಾವನ ಕುಲದೊಂದಿಗೆ ಎಲ್ಲರೂ ಒಂದಾಗಬೇಕು ಎಂದು ಮೀಸಲಾತಿ ಹೋರಾಟಗಾರರಿಗೆ ಎಚ್ಚರಿಕೆ ಸಂದೇಶವನ್ನು ದಿಂಲಾಗೇಶ್ವರ ಸ್ವಾಮಿ ಎಚ್ಚರಿಕೆ ನೀಡಿದರು. ಮಾನವ ಕುಲದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇರುತ್ತದೆ ಎಂದರು.