ವಿಜಯಪುರ: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಮೈಮೇಲಿನ ಬಂಗಾರ ಕಳ್ಳತನಗೈದಿರುವ ಘಟನೆ ವಿಜಯಪುರ ನಗರದ ಆರೋಗ್ಯ ಧಾಮ ಆಸ್ಪತ್ರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಚಾಲುಕ್ಯ ನಗರದ ನಿವಾಸಿ ಶ್ರೀಕಾಂತ ಕೊರಚಗಾಂವ ಎಂಬುವರ ಬಂಗಾರ ಕಳವು ಆಗಿದೆ. ಶ್ರೀಕಾಂತ ಅವರಿಗೆ ಆಕಸ್ಮಿಕವಾಗಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆರೋಗ್ಯಧಾಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ದಾಖಲು ಮಾಡಿದ್ದು, ಶ್ರೀಕಾಂತ ಅವರ ಕೊರಳಲ್ಲಿದ್ದ 1.20 ಲಕ್ಷ ಮೌಲ್ಯದ 30 ಗ್ರಾಂ ಚಿನ್ನ ಕಳ್ಳತನ ಆಗಿದೆ. ಅದಕ್ಕಾಗಿ ಪತ್ತೆ ಮಾಡುವಂತೆ ವೀರೇಂದ್ರ ದೂರು ನೀಡಿದ್ದಾರೆ. ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.